ವೈಜ್ಞಾನಿಕ ಹೆಸರು: ಸ್ಟ್ರೋಬಿಲಾಂಟಸ್ ಸಿಲಿಯಾಟಸ್ ಇತರೆ ಹೆಸರು: ಲೆಸ್ಸರ್ ಕುರಂಜಿ, ಕರಿಮುಕುರಂಜಿ (ಮಲಯಾಳಂ), ವೆಲ್ಲಕುರಿಂಜಿ, ಚಿನ್ನಿಕುರಿಂಜಿ (ತಮಿಳು) ಸಂಸ್ಕೃತ: ಸಹಶ್ಚರಾ, ಸಹಾರಾ == ದೈಹಿಕ ರಚನೆ == ಸಹಚರ ಪೊದೆ ಜಾತಿಯ ಸಸ್ಯವಾಗಿದ್ದು ರೋಮರಹಿತ ಶಾಖೆಗಳಿಂದ ಕೂಡಿದೆ. ಎಲೆಯ ಮೇಲೆ ಮೊಟ್ಟೆಯಾಕಾರದ ವೃತ್ತಗಳಿದ್ದು ಎಲೆ-ಕಾಂಡಗಳು ಸುಮಾರು 2 ಸೆಂ.ಮೀ ಉದ್ದವಿರುತ್ತವೆ. ಹೂವುಗಳು 1.5 ಸೆಂ.ಮೀ ನಷ್ಟು ಉದ್ದವಿರುತ್ತವೆ. ಡಿಸೆಂಬರ್ ಹಾಗೂ ಮೇ ತಿಂಗಳಲ್ಲಿ ಹೂಗಳನ್ನು ಕಾಣಬಹುದು. ಎಲೆಗಳು ಹೆಚ್ಚು ಪೊಟ್ಯಾಶಿಯಂ ಅಂಶದಿಂದ ಕೂಡಿವೆ. ಬೇರುಗಳಲ್ಲಿ ಲೋಪಿಯಂ ಅಂಶವನ್ನು ಕಾಣಬಹುದು. == ವೈದ್ಯಕೀಯ ಉಪಯುಕ್ತತೆ == ಇದು ವಿಶ್ವದಾದ್ಯಂತ ಶೇಕಡಾ 75 ರಷ್ಟು ನಂಬಲಾದ ಗಿಡಮೂಲಿಕೆಯಾಗಿದೆ. ಆಂಟಿಬಯಾಟಿಕ್, ಆಂಟಿಫಂಗಲ್, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಸಸ್ಯದ ಎಥನೊಲಿಕ್ ಸಾರವು ಉರಿಯೂತ ಶಮನಕಾರಿಯಾಗಿದೆ ಇದು ಉತ್ತಮ ಔಷಧೀಯ ಗುಣಗಳುಳ್ಳ ಸಸ್ಯವಾಗಿದ್ದು ಉಪಯೋಗಕ್ಕೆ ವೈದಿಕ ಕಾಲದಿಂದಲೂ ಇತಿಹಾಸವಿದೆ. ಹಲ್ಲಿನ ನೋವುಗಳಿಗೆ ಉತ್ತಮ ಔಷಧವಾಗಿದೆ. ಸಂಧಿವಾತ ಚರ್ಮದ ಅಸ್ವಸ್ಥತೆಗಳಿಗೆ ಬಳಸಲಾಗುತ್ತದೆ. ಚರ್ಮ ಹಾಗು ಮೂತ್ರದ ಸೋಂಕುಗಳಿಗೆ ಔಷಧವಾಗಿ ಬಳಕೆ ಮಧುಮೇಹ ನಿಯಂತ್ರಣಕ್ಕೆ ಖಿನ್ನತೆ ಶಮನಕಾರಿ ನೋವು ನಿವಾರಕವಾಗಿ ಆಂಟಿಕಾನ್ಸರ್ ಏಜೆಂಟ್ ಆಗಿ. = ಉಲ್ಲೇಖಗಳು =